BSNL Recruitment 2026 ಭಾರತದ ದೇಶದ ಪ್ರಮುಖ ಸರ್ಕಾರಿ ದೂರಸಂಪರ್ಕ ಸಂಸ್ಥೆಯಾದ BSNL (Bharat Sanchar Nigam Limited) 2026ನೇ ಸಾಲಿನಲ್ಲಿ ದೊಡ್ಡ ಉದ್ಯೋಗ ನೇಮಕಾತಿಯ ಪ್ರಕಟಣೆಯನ್ನು ಹೊರಡಿಸಿದೆ. ಈ ಬಾರಿ 120 Senior Executive Trainee (ಸೀನಿಯರ್ ಎಕ್ಸಿಕ್ಯೂಟಿವ್ ಟ್ರೇನಿ) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು,ಆಸಕ್ತರು ಈಗ ಅರ್ಜಿಯನ್ನು ಸಲ್ಲಿಸಬಹುದು. ಈಗ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅಧಿಕೃತವಾಗಿ ವಿಸ್ತರಣೆ ಮಾಡಲಾಗಿದೆ.
ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಇಂಜಿನಿಯರಿಂಗ್ ಪದವಿಯನ್ನು ಉತ್ತಿರ್ಣ ಗೊಳಿಸಿದ ವಿದ್ಯಾರ್ಥಿಗಳಿಗೆ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಇದು ಉದ್ಯೋಗವನ್ನು ಪಡೆಯಲು ಅತ್ಯಂತ ಸುವರ್ಣ ಅವಕಾಶವಾಗಿದೆ.
BSNL ಸಂಸ್ಥೆ ಎಂದರೇನು?
BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಟೆಲಿಕಾಂ ಕಂಪನಿ. ಇದು ದೇಶದಾದ್ಯಂತ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತದೆ. ಇಂಟರ್ನೆಟ್, ಫೋನ್ ಸೇವೆಗಳು, ಬ್ರಾಡ್‌ಬ್ಯಾಂಡ್ ಮತ್ತು ಇತರ ಟೆಲಿಕಾಂ ಸೇವೆಗಳ ಮೂಲಕ ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿದೆ.ಇದು ಸರ್ಕಾರದ ಅದಿನದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇದರ ಸೇವೆಗಳು ಕಡಿಮೆದರದಲ್ಲಿ ಲಭ್ಯವಾಗುತ್ತದೆ.
BSNL ನಲ್ಲಿ ಕೆಲಸ ಮಾಡುವುದು ಎಂದರೆ ಸರ್ಕಾರಿ ಉದ್ಯೋಗದ ಭದ್ರತೆ, ಉತ್ತಮ ವೇತನ ಮತ್ತು ಭವಿಷ್ಯಕ್ಕೆ ಸ್ಥಿರತೆ ಪಡೆಯುವುದಕ್ಕೆ ಸಮಾನ.
ನೇಮಕಾತಿ ಮುಖ್ಯ ವಿವರಗಳು (BSNL Recruitment 2026)
ಸಂಸ್ಥೆ ಹೆಸರು: BSNL (Bharat Sanchar Nigam Limited)
ಹುದ್ದೆ ಹೆಸರು: Senior Executive Trainee
ಒಟ್ಟು ಹುದ್ದೆಗಳು: 120 ಹುದ್ದೆಗಳಿವೆ
ಉದ್ಯೋಗ ಪ್ರಕಾರ: ಸರ್ಕಾರಿ ಉದ್ಯೋಗವಾಗಿದೆ
ಅರ್ಜಿ ವಿಧಾನ: ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು
ಕೆಲಸದ ಸ್ಥಳ: ಭಾರತಾದ್ಯಂತ ಲಭ್ಯವಿರುವ ಸಾಧ್ಯತೆ ಇದೆ.
ಅರ್ಜಿ ಕೊನೆಯ ದಿನಾಂಕ: ವಿಸ್ತರಿಸಲಾಗಿದೆ (ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ)
🎓 ಅರ್ಹತೆ (Eligibility Criteria)
ಈ ಹುದ್ದೆಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಕೆಳಗಿನ ಅರ್ಹತೆ ಹೊಂದಿರಬೇಕು:
ಶೈಕ್ಷಣಿಕ ಅರ್ಹತೆ:
- B.E / B.Tech (Electrical / Electronics / Computer Science / IT / Telecommunication)
- ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಸಮಾನ ಪದವಿ ಇರಬೇಕು.
📌 ಇತರ ಅಗತ್ಯತೆಗಳು:
- ಭಾರತೀಯ ನಾಗರಿಕರಾಗಿರಬೇಕು.
- ಕಂಪ್ಯೂಟರ್ ಜ್ಞಾನ ಉತ್ತಮವಾಗಿರಬೇಕು.
- ಸಂವಹನ ಕೌಶಲ್ಯ ಹೊಂದಿರಬೇಕು (communication skill )
ವಯೋಮಿತಿ (Age Limit)
ಕನಿಷ್ಠ ವಯಸ್ಸು: 21 ವರ್ಷ
ಗರಿಷ್ಠ ವಯಸ್ಸು: 30 ವರ್ಷ (ಅಂದಾಜು)
👉ಸರ್ಕಾರಿ ನಿಯಮಗಳ ಪ್ರಕಾರ SC/ST/OBC ಅಭ್ಯರ್ಥಿಗಳಿಗೆ ಸಡಿಲಿಕೆ ಇರುತ್ತದೆ
ಆಯ್ಕೆ ಪ್ರಕ್ರಿಯೆ (Selection Process)
ಇದು ಸರ್ಕಾರಿ ಉದ್ಯೋಗ ವಾಗಿರುವದರಿಂದ BSNL ನೇಮಕಾತಿ ಪ್ರಕ್ರಿಯೆ ಸ್ಪರ್ಧಾತ್ಮಕವಾಗಿರುತ್ತದೆ. ಸಾಮಾನ್ಯವಾಗಿ ಈ ಕೆಳಗಿನ ಎಲ್ಲಾ ಹಂತಗಳಲ್ಲಿ ನಡೆಯುತ್ತದೆ:
1️⃣ ಆನ್‌ಲೈನ್ ಪರೀಕ್ಷೆ (Written Exam)
ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ತಾಂತ್ರಿಕ ಮತ್ತು ಸಾಮಾನ್ಯ ಜ್ಞಾನ ಪರೀಕ್ಷಿಸಲಾಗುತ್ತದೆ.
2️⃣ ಸಂದರ್ಶನ (Interview)
ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
3️⃣ ದಾಖಲೆ ಪರಿಶೀಲನೆ (Document Verification)
ಅಂತಿಮವಾಗಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ಪರೀಕ್ಷಾ ವಿಷಯಗಳು ಈ ಕೆಳಗಿಂನಂತಿದೆ
ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಈ ವಿಷಯಗಳು ಇರುತ್ತವೆ:
- Technical Subjects (Engineering Core Subjects)
- General Knowledge
- Reasoning Ability
- Quantitative Aptitude
- English ಲ್ಯಾಂಗ್ವೇಜ್
ವೇತನ (Salary Details)
ಇದು ಸರ್ಕಾರಿ ಉದ್ಯೋಗವಾಗಿರುವದರಿಂದ BSNL ನಲ್ಲಿ ಕೆಲಸ ಮಾಡುವವರಿಗೆ ಉತ್ತಮ ವೇತನ ನೀಡಲಾಗುತ್ತದೆ.
ಆರಂಭಿಕ ವೇತನ: ₹40,000 ರಿಂದ ₹1,40,000 (ಹುದ್ದೆಯ ಆಧಾರದಲ್ಲಿ) ವೇತನವನ್ನು ನಿಗದಿ ಪಡಿಸಲಾಗುತ್ತದೆ.
ಹೆಚ್ಚುವರಿ ಭತ್ಯೆಗಳು: DA, HRA, ತ ಮುಂತಾದವು ಲಭ್ಯವಾಗುತ್ತದೆ.
ಸರ್ಕಾರಿ ಸೌಲಭ್ಯಗಳು: Pension, Medical Benefits ಮುಂತಾದ ಸೌಲಭ್ಯ ಗಳು ದೊರೆತುತ್ತದೆ.
ಉದ್ಯೋಗ ಭದ್ರತೆ: ಶಾಶ್ವತ ಸರ್ಕಾರಿ ಉದ್ಯೋಗವಾಗಿರುತ್ತದೆ.
ಕೊನೆಯ ದಿನಾಂಕದ ವಿಸ್ತರಣೆ
ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದ ಕಾರಣ, ತಾಂತ್ರಿಕ ತೊಂದರೆಗಳು ಮತ್ತು ಇತರ ಕಾರಣಗಳಿಂದ BSNL ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
👉 ಇದರಿಂದ ಇನ್ನೂ ಅರ್ಜಿ ಹಾಕದವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ.
ಇದನ್ನು ಓದಿ : Top 20 Government Apps in India 2026: ಜನರಿಗೆ ಉಪಯೋಗವಾಗುವ ಅತ್ಯುತ್ತಮ ಸರ್ಕಾರಿ Apps List
ಅರ್ಜಿಯನ್ನು ಸಲ್ಲಿಸುವ ವಿಧಾನ
ಅರ್ಜಿ ಹಾಕುವುದು ತುಂಬಾ ಸರಳ:
💥ಹಂತ 1:
ಅಧಿಕೃತ BSNL ವೆಬ್‌ಸೈಟ್‌ಗೆ ಹೋಗಿ
👉Website link ಅನ್ನು ಸರಣಿಯ ಕೆಲಗಿನ ಭಾಗದಲ್ಲಿ ನೀಡಲಾಗಿದೆ
💥ಹಂತ 2:
“Recruitment 2026” ವಿಭಾಗವನ್ನು ತೆರೆಯಿರಿ
💥ಹಂತ 3:
Senior Executive Trainee ಹುದ್ದೆಯನ್ನು ಆಯ್ಕೆ ಮಾಡಿ
💥ಹಂತ 4:
ಹೊಸ Registration ಮಾಡಿ
💥ಹಂತ 5:
ಅರ್ಜಿ ಫಾರ್ಮ್ ಅನ್ನು ಸರಿಯಾಗಿ ತುಂಬಿ
💥ಹಂತ 6:
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
💥ಹಂತ 7:
ಅರ್ಜಿ ಶುಲ್ಕ ಪಾವತಿ ಮಾಡಿ
💥ಹಂತ 8:
Final Submit ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಬೇಕಾಗಿರುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಸೈಸ್ ಫೋಟೋ
- ಸಹಿ (Signature)
- ಶೈಕ್ಷಣಿಕ ಪ್ರಮಾಣಪತ್ರಗಳು
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
- ಗುರುತಿನ ದಾಖಲೆಗಳು
ಮುಖ್ಯ ಸಲಹೆಗಳು
💥ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ಅರ್ಜಿ ಹಾಕಿ
💥ಕೊನೆಯ ದಿನಾಂಕದವರೆಗೆ ಕಾಯದೆ ಬೇಗ ಅರ್ಜಿ ಸಲ್ಲಿಸಿ
💥ತಪ್ಪು ಮಾಹಿತಿಯನ್ನು ನೀಡಬೇಡಿ
💥ಅರ್ಜಿ ಸಲ್ಲಿಸಿದ ನಂತರ confirmation print ತೆಗೆದುಕೊಳ್ಳಿ
💥fake websites ಮತ್ತು links ಗಳಿಂದ ದೂರವಿರಿ
ಈ ಅವಕಾಶ ನಿಮಗೆ ಯಾಕೆ ಮುಖ್ಯ
- ಸರ್ಕಾರಿ ಉದ್ಯೋಗ ಭದ್ರತೆ
- ಉತ್ತಮ ವೇತನ
- ದೇಶದ ಪ್ರಮುಖ ಸಂಸ್ಥೆಯಲ್ಲಿ ಕೆಲಸ
- career growth ಅವಕಾಶಗಳು
- pension ಮತ್ತು ಭವಿಷ್ಯ ಭದ್ರತೆ
👉 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು career life-changing opportunity ಆಗಬಹುದು.
BSNL ನ ಪ್ರಮುಖ ಅಧಿಕೃತ ಲಿಂಕ್‌ಗಳು (Important Links)
ಅಧಿಕೃತ ವೆಬ್‌ಸೈಟ್: bsnl.co.in
ಅರ್ಜಿ ಸಲ್ಲಿಸುವ ಪೋರ್ಟಲ್: bsnlregistration.ibtexamination.com
ನೇಮಕಾತಿ ವಿಭಾಗ (Careers Page): externalexam.bsnl.co.in
BSNL Job Requrement 2026
ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಸಂಚಾರ್ ನಿಗಮ ಲಿಮಿಟೆಡ್ (BSNL) ತನ್ನ ನೆಟ್‌ವರ್ಕ್ ವಿಸ್ತರಣೆ ಮತ್ತು 4G/5G ಸೇವೆಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಸರ್ಕಾರಿ ವಲಯದಲ್ಲಿ ಸ್ಥಿರವಾದ ವೃತ್ತಿಜೀವನವನ್ನು ಬಯಸುವ ಯುವಜನತೆಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಈ ಲೇಖನದಲ್ಲಿ ನಾವು ಚರ್ಚಿಸಿದಂತೆ, ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ತಡಮಾಡದೆ ಅರ್ಜಿಯನ್ನು ಸಲ್ಲಿಸುವುದು ಸೂಕ್ತ.
ಸ್ಪರ್ಧಾತ್ಮಕ ಪರೀಕ್ಷೆಯು ಕಠಿಣವಾಗಿರುವುದರಿಂದ, ಈಗಿನಿಂದಲೇ ವ್ಯವಸ್ಥಿತವಾಗಿ ಸಿದ್ಧತೆ ಆರಂಭಿಸುವುದು ನಿಮ್ಮ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಪಠ್ಯಕ್ರಮದ (Syllabus) ಆಧಾರದ ಮೇಲೆ ಅಭ್ಯಾಸ ನಡೆಸಿ. ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ ಮತ್ತು ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಅಂತಿಮ ದಿನಾಂಕಕ್ಕಿಂತ ಮುಂಚಿತವಾಗಿಯೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.
ಧನ್ಯವಾದಗಳು
ಇದನ್ನು ಓದಿ : 2026 UPI New Rules Update : ಹೊಸ ನಿಯಮಗಳು, Daily Limit, Charges & Best Apps ಗಳ ಬಗ್ಗೆ ಸಂಪೂರ್ಣ ಮಾಹಿತಿ